“ರಾಷ್ಟ್ರೀಯ ಸ್ವಯಂಸೇವಕ ಸಂಘ”

ಸುಮಾರು 2000 ಹಾಗು ಅದರ ಹಿಂದಿನ ದಶಕಗಳಲ್ಲಿನ ಯುವಕರು ಹಾಗು ಬಾಲಕರಲ್ಲಿ ಶಾಖೆ ಅಥವಾ ಸಂಘ ಎಂದರೆ ಏನೋ ಒಂದು ಹುರುಪು ಉತ್ಸಾಹ . ಯುವಕರು,ಬಾಲಕರು ,ಮಧ್ಯವಯಸ್ಕರೂ,ವೃದ್ದರೆಂಬ ಭೇದವಿಲ್ಲದೆ ಸಾಯಂಕಾಲ ಒಟ್ಟಾಗಿ ಸೇರುತ್ತಿದ್ದರು. ಮುಖ್ಯವಾಗಿ ಯುವಕರು ಅಲ್ಲಿ ನಡಿಯುತಿದ್ದ. ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದರು. ಆದರೆ ಜೊತೆಗೆ ಶಾಖೆಯ ಉದ್ದೇಶವೆ ಬೇರೆಯಾಗಿತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತಹ ವಾಕ್ಯವನ್ನು ಚೆನ್ನಾಗಿ ಅರಿತಿದ್ದ ಸಂಘವು ಕ್ರೀಡೆಯ ಜೊತೆಗೆ ಯುವಕರಲ್ಲಿ ರಾಷ್ಟ್ರೀಯತೆ,ದೇಶಭಕ್ತಿ,ಶಿಸ್ತು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಅವರನ್ನು ಈ ದೇಶದ ಜವಾಬ್ದಾರಿಯುತ ನಾಗರೀಕರನ್ನಾಗಿಸುವ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿದೆ.

ಈ ಸಂಘವನ್ನು 27 september 1925ರಲ್ಲಿ ಕೇಶವ ಬಲಿರಾಮ ಹೆಡ್ಗೆವಾರರು ಮಹಾರಾಷ್ಟ್ರದ ನಾಗ್ಪುರದಲ್ಲಿ ಸ್ಥಾಪಿಸಿದರು. ದೇಶದೆಲ್ಲೆಡೆ ಇಂದು 56,859 ಅಧಿಕ ಶಾಖೆಗಳೂ ಹಾಗೂ 50-60 ಲಕ್ಷ ಸ್ವಯಂ ಸೇವಕರು ಈ ರಾಷ್ಟ್ರೀಯವಾದಿ ಸಂಘದ ಭಾಗವಾಗಿದ್ದಾರೆ. ಸಂಘವು ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷ (ಭಾರತೀಯ ಜನತಾ ಪಾರ್ಟಿ ) ವನ್ನು ಹೊಂದಿದೆ.

ಸಂಘವು ತನ್ನ ಸ್ವಯಂ ಸೇವಕರಿಗೆ ದೈಹಿಕ,ಮಾನಸಿಕವಾಗಿ ಬಲಿಷ್ಟ ಹಾಗೂ ಆತ್ಮರಕ್ಷಣೆಯಂತಹ ಕಲೆಗಳನ್ನು ಕಲಿಸಿಕೊಡುತ್ತಿದೆ. ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂಕಂಪ, ಬರ ಹಾಗು ಇನ್ನಾವುದೇ ತರಹದ ಅವಘಡಗಳು ಸಂಭವಿಸಿದಾಗ, ಸೈನ್ಯದ ನಂತರದ ಸ್ಥಾನದಲ್ಲಿ ಬಂದು ಎಲ್ಲ ರೀತಿಯ ನೆರವು ನೀಡುವಲ್ಲಿ ಸಂಘವು ಮುಂಚೂಣಿಯಲ್ಲಿರುತ್ತದೆ.

ಇಂದು ದೇಶಕ್ಕೆ ಬಲಿಷ್ಠ ಹಾಗು ಸಮರ್ಥ ನಾಯಕರನ್ನು ನೀಡುವಲ್ಲಿ, ಭಾರತ ವಿಶ್ವದೆದುರು ಪ್ರಭಾವಶಾಲಿಯಾಗಿ ಬೆಳೆಯಲು ಹಾಗು ವಿಶ್ವಗುರುವಾಗುವತ್ತ ದಾಪುಗಾಲಿಡಲು ಸಂಘದ ಪಾತ್ರ ಬಹಳ ಪ್ರಮುಖವಾದದ್ದು.

ಆದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಂಘಕ್ಕೆ ಕೋಮುವಾದದ ಪಟ್ಟ ಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಆದರೆ ಇಂದು ಹೆಚ್ಚಿನ ಯುವ ಸಮೂಹಕ್ಕೆ ಸಂಘದ ಬಗ್ಗೆ ಹೆಚ್ಚಿನ ಒಲವು ಇದ್ದಂತೆ ಕಂಡುಬರುತ್ತಿಲ್ಲ.ಈಗಿನ ಯುವ ಸಮುದಾಯ ಆಧುನಿಕತೆಯ ನೆಪದಲ್ಲಿ, ಮೊಬೈಲತಂತ್ರಜ್ಞಾನದ ಸೋಗಿನಲ್ಲಿ ತಪ್ಪು ದಾರಿಗೆ ಎಳೆಯಲ್ಪಡುತ್ತಿದ್ದಾರೆ . ಹೆಚ್ಚಿನ ಯುವ ಸಮುದಾಯವನ್ನು ಆಕರ್ಷಿಸಿ ಅವರಲ್ಲಿ ದೇಶಪ್ರೇಮ, ರಾಷ್ಟ್ರೀಯತೆ,ಆತ್ಮವಿಶ್ವಾಸವನ್ನು ತುಂಬುವಕೆಲಸ ಆಗಬೇಕಾಗಿದೆ.

Leave a Reply

Your email address will not be published. Required fields are marked *